ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೊಂಕಣಿ ಭಾಷಿಕ ಯಕ್ಷಗಾನ ಕಲಾವಿದನಿಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 30 , 2015
ಆಗಸ್ಟ್ 30, 2015

ಕೊಂಕಣಿ ಭಾಷಿಕ ಯಕ್ಷಗಾನ ಕಲಾವಿದನಿಗೆ ಸನ್ಮಾನ

ಕುಮಟಾ : ಗ್ರಾಮೀಣ ಭಾಗದಲ್ಲಿ ಅದೆಷ್ಟೊ ಕಲಾವಿದರು ತಮ್ಮಲ್ಲಿರುವ ಪ್ರತಿಭಾ ಕ್ಷಮತೆಯನ್ನು ಪ್ರದರ್ಶಿಸಲಾಗದೆ ಸೂಕ್ತ ಅವಕಾಶಗಳಿಂದ ವಂಚಿತರಾಗಿ ಕಲಾ ಪ್ರದರ್ಶನದ ಆಸೆ ಆಕಾಂಕ್ಷೆಗಳನ್ನು ಆತ್ಮದಲ್ಲಿಟ್ಟುಕೊಂಡೆ ಹೋಗುತ್ತಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನಿಸಿ ಸಮಾಧಾನದ ಮಾತುಗಳನ್ನಾಡಿದಾಗ ಅವರಲ್ಲಿ ಸಾರ್ಥಕತೆ ಭಾವನೆ ಮೂಡುತ್ತದೆ. ಅಂತಹದೊಂದು ಕೊಂಕಣಿ ಭಾಷಿಕ ಯಕ್ಷಗಾನ ಕಲಾವಿದನಾದ ತಾಲೂಕಿನ ಮೂರೂರು ಅಳವಳ್ಳಿ ಗ್ರಾಮದ ಗೋವಿಂದ ಭಾನು ದೇಶಭಂಡಾರಿ ಅವರ ಮನೆಗೆ ತೆರಳಿ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಕೋಡ ಚಿನ್ನಾ ಶನಿವಾರ ಸನ್ಮಾನಿಸಿದರು.

75ರ ಇಳಿ ವಯಸ್ಸಿನಲ್ಲೂ ಯಕ್ಷಗಾನದ ಕಿಚ್ಚು, ಹುಮ್ಮಸ್ಸು ಗೋವಿಂದ ದೇಶಭಂಡಾರಿ ಅವರಲ್ಲಿದೆ. ತಮ್ಮ ಜೀವನದುದ್ದಕ್ಕೂ ನಿರ್ವಹಿಸಿದ ಹಲವು ಪಾತ್ರಗಳನ್ನು ನೆನೆದು ಸಂತಸ ಪಡುತ್ತಾರೆ. ಮನೆಯಲ್ಲಿಯ ಕೆಟ್ಟ ಬಡತನದ ನಡುವೆಯೂ ಪಾಲಕರ ವಿರೋಧವನ್ನು ಲೆಕ್ಕಿಸದೆ ಯಕ್ಷಗಾನದ ಕಿರೀಟ ತೊಟ್ಟು ಹೆಜ್ಜೆ ಹಾಕಿದ್ದನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ಯಾವ ಪಾತ್ರ ನೀಡಿದರೂ ಸಮರ್ಥವಾಗಿ ನಿರ್ವಹಿಸುವ ಅವರು ಭಸ್ಮಾಸುರ, ಕಷ್ಣ, ಭೀಮ, ಜಯಂತ, ಈಶ್ವರ ಮೊದಲಾದ ಪಾತ್ರಗಳನ್ನು ಮಾಡಿದ ಹೆಮ್ಮೆ ಅವರಲ್ಲಿದೆ. ಕೂಜಳ್ಳಿಯ ನಾರಾಯಣ ಹೆಗಡೆ, ಮೊಗಟಾದ ಬೀರಣ್ಣ ನಾಯ್ಕ, ಗೋಪಾಲ ಆಚಾರಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಪ್ರೋತ್ಸಾಹ ಯಕ್ಷಗಾನಕ್ಕೆ ಪ್ರೇರಣೆ ನೀಡಿತ್ತು ಎಂದು ಗೋವಿಂದ ದೇಶಭಂಡಾರಿ ತಿಳಿಸುತ್ತಾರೆ.

ಎಕ್ಟರ್ ಜೋಶಿ ಮೇಳಕ್ಕೆ ಬರ ಮಾಡಿಕೊಂಡಿದ್ದುಂಟು. ಆದರೆ ವೈಯಕ್ತಿಕ ಸಮಸ್ಯೆಗಳಿಂದ ಮೇಳಕ್ಕೆ ಸೇರಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದಲ್ಲಿ ಮೇಳ ಕಟ್ಟುವ ದಷ್ಟಿಯಿಂದ ಮಹಾಗಣಪತಿ ಯಕ್ಷಗಾನ ಮಂಡಳಿ ಅಳವಳ್ಳಿ ಕಟ್ಟಿ ಬೆಳೆಸಲು ಸಾಧ್ಯವಾಗದೆ ಕೆ ಬಿಡಲಾಯಿತು. ವಯಸ್ಸಿನ ಪರಿವೇ ಇಲ್ಲದ ಗೋವಿಂದ ದೇಶಭಂಡಾರಿ ಅವಕಾಶ ಸಿಕ್ಕಿದರೆ ಈಗಲೂ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲು ಸಿದ್ಧ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕೊಂಕಣಿ ಭಾಷೆ ಮಾತನ್ನಾಡುವ ಕಲಾವಿದರನ್ನು ಗುರುತಿಸುವ ಹಾಗೂ ಕೊಂಕಣಿಯಲ್ಲಿ ಸಾಧನೆ ಮಾಡಿದ ಬೆಳಕಿಗೆ ಬಾರದ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಮನೆಗಳಿಗೆ ತೆರಳಿ ಸನ್ಮಾನಿಸುವ ವಿನೂತನ ಪರಿಪಾಠವನ್ನು ಮಾಜಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಕಾಸರಕೋಡ ಚಿನ್ನಾ ನಡೆ ಔಚಿತ್ಯಪೂರ್ಣವಾದದ್ದು ಅವರ ಅಧಿಕಾರಾವಧಿಯಲ್ಲಿ ನಡೆಸಿದ ಘರ ಘರ ಕೊಂಕಣಿ ಕಾರ್ಯಕ್ರಮ ಜನಪ್ರೀಯಗೊಂಡಿದ್ದು ಅದನ್ನು ಈಗಲೂ ಅವರು ಮುಂದುವರೆಸಿದ್ದಾರೆ. ಕುಮಟಾದಲ್ಲಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದ ಅವರು ಈಗ ಆ. 29 ಹಾಗೂ 30 ರಂದು ಶಿರಸಿ ತಾಲೂಕಿನಲ್ಲಿ ನಡೆಸಲಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದು ಚಿನ್ನಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಂಕಣಿ ಭಾಷೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಶಿಕ್ಷಕಿ ಜಯಾ ಶಾನಭಾಗ ಹಾಗೂ ಬಗ್ಗೋಣದ ನಿವತ್ತ ಶಿಕ್ಷಕ ಶಂಕರ್ ಎಸ್ ಶೇಟ ಅವರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿದರು. ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ಚಿದಾನಂದ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕೃಪೆ : vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ